Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಾಂಬೋ ಮೊದಲ ಪ್ರತಿ ಸಿದ್ದ
Posted date: 23 Mon, Jul 2012 ? 02:16:34 PM
ಪ್ರಖ್ಯಾತ ಹಾಸ್ಯ ನಟ ಹೀರೋ ಆಗಿ ಅಲ್ಲದೆ ಜಂಟಿ ನಿರ್ಮಾಪಕನಾಗಿ ರಾಂಬೋ ಸಿನಿಮಾವನ್ನು ಅಟ್ಲಾಂಟ ನಾಗೇಂದ್ರ ಅವರ ಜೊತೆ ಸೇರಿ ತಯಾರಿಸಿರುವ ಚಿತ್ರ ಮೊದಲ ಪ್ರತಿ ಸಿದ್ದಮಾಡಿಕೊಂಡು ಸೆನ್ಸಾರ್ ಬಳಿ ಹೋಗಲು ರೆಡಿಯಾಗಿದೆ.
ತರುಣ್ ಸುಧೀರ್ ಅವರ ಸಹಾಯದೊಂದಿಗೆ ರಾಂಬೋ -3ಡಿ ಸಿನಿಮಾ ನಿರ್ದೇಶಕರೂ ಎಂ ಎಸ್ ಶ್ರೀನಾಥ್ ಮೊದಲ ಪ್ರಯತ್ನದಲ್ಲಿ ಹಾಸ್ಯೋತ್ಸವ ಅನುಭವ ಜೊತೆಗೆ ಸಮಾಜಕ್ಕೆ ಸಂದೇಶವನ್ನು ರವಾನಿಸಿದ್ದಾರೆ. 3ಡಿ ಅಂದರೆ – ದಗಲ್ಬಾಜಿ, ದಗಾಕೋರ ಹಾಗೂ ಡೊವ್ವ್ ರಾಜ ಎಂದು ಅರ್ಥ ಅನ್ನುತ್ತಾರೇ ಹಾಸ್ಯ ನಟ ನಾಯಕನಾಗಿರುವ ಈ ಸಂದರ್ಭದಲ್ಲಿ. ಹುಟ್ಟು ತರ್ಲೆಗಳು ಮಾಡಬಾರದನ್ನು ಮಾಡಿ ಆಗಬಾರದನ್ನು ಆಗತ್ತೆ ಅಂತರಾಲ್ಲ ಹಾಗೆ ಈ ಚಿತ್ರ ಸಂದರ್ಭಗಳನ್ನು ವಿವರಿಸುತ್ತಾ ಹೋಗುತ್ತದೆ.
ಶರಣ್ ನಾಯಕನಾದರೆ, ಅವರ ಸಹೋದರಿ ಶ್ರುತಿ ಈ ಚಿತ್ರದಲ್ಲಿ ಜಿಲ್ಲಾಧಿಕಾರಿ ಪಾತ್ರ ನಿರ್ವಹಿಸಿದ್ದಾರೆ. ಮಾಧುರಿ ನಾಯಕಿಯಾಗಿ ಜೊತೆಗೆ ಸಂಕೇತ್ ಕಾಶಿ, ಕುರಿ ಪ್ರತಾಪ್ ಹಾಗೂ ಇತರರು ಇರುವರು.
ಎಸ್ ಕೃಷ್ಣ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಕೆ ಎಂ ಪ್ರಕಾಷ್ ಸಂಕಲನ, ಬಾಬು ಖಾನ್, ಮೋಹನ್ ಬಿ ಕೆರೆ ಕಲಾ ನಿರ್ದೇಶನ. ಇಮ್ರಾನ್ ಸರ್ದಾರಿಯ, ಕಲೈ, ರಾಮು ಅವರ ನೃತ್ಯ ಈ ಚಿತ್ರಕ್ಕಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಾಂಬೋ ಮೊದಲ ಪ್ರತಿ ಸಿದ್ದ - Chitratara.com
Copyright 2009 chitratara.com Reproduction is forbidden unless authorized. All rights reserved.